Surprise Me!

NIA, Forensic Experts Team Reaches Bangalore Blast Site

2014-12-29 14 Dailymotion

TV9 Breaking: NIA, Forensic Experts Team Reaches Bangalore Blast Site ..,

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಪೋಟ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇದೀಗ ಘಟನಾ ಸ್ಥಳಕ್ಕೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ, ಎನ್ ಐಎ ತಂಡ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನೊಂದೆಡೆ, ತಮಿಳುನಾಡು ಹಾಗೂ ಆಂಧ್ರ ಪೊಲೀಸರು ಕೂಡಾ ಪ್ರಕರಣದ ತನಿಖೆಯಲ್ಲಿ ಕೈ ಜೋಡಿಸಿದ್ದಾರೆ. ಸ್ಪೋಟದ ಹಿಂದೆ ತಮಿಳುನಾಡು ಮೂಲಕ ಅಲ್ ಉಮ್ಮಾ ಸಂಘಟನೆ ಸೇರಿದಂತೆ ಸಿಮಿ ಉಗ್ರರ ನೆರಳು ಗೋಚರಿಸಿರೋ ಹಿನ್ನಲೆಯಲ್ಲಿ ವಿವಿಧ ಕೋನಗಳಲ್ಲಿ ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗಿದೆ. ಇನ್ನು ನಿನ್ನೆಯ ಘಟನೆ ಬಗ್ಗೆ ನಗರ ಪೊಲೀಸ್ ಅಧಿಕಾರಿಗಳಿಂದ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.