ಭಾರತದಲ್ಲಿಯೇ ಅತಿ ಹೆಚ್ಚು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ಇಂದು 'ಶಿಯೋಮಿ ವೈ' ಸೀರಿಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಇದೇ ಮೊದಲ ಭಾರಿಗೆ ಸೆಲ್ಫಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಒಪ್ಪೊ ಮತ್ತು ವಿವೊ ಕಂಪೆನಿಗಳಿಗೆ ಶಾಕ್ ನೀಡಿದೆ.
ಇದೀಗ ಬಿಡುಗಡೆಯಾಗಿರುವ "ರೆಡ್‌ಮಿ ವೈ1 " ಸ್ಮಾರ್ಟ್‌ಫೋನ್ 5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೋರಿಲ್ಲ 3 ಗ್ಲಾಸ್‌ನಿಂದ ರಕ್ಷಣೆ ಹೊಂದಿದೆ. ಮೊಬೈಲ್ ವಿನ್ಯಾಸ ರೆಡ್ ಮಿ 4 ನಂತೆಯೇ ಇದ್ದು, ಸ್ಮಾರ್ಟ್‌ಫೋನ್ ನೋಡಲು ಆಕರ್ಷಕವಾಗಿದೆ.
ಇದೇ ಮೊದಲ ಭಾರಿಗೆ ಸೆಲ್ಫಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಅತ್ಯಂತ ಕಡಿಮೆ ಬೆಲೆಗೆ "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಿಯೋಮಿ ಭಾರತದ ಮೊಬೈಲ್ ಮಾರುಕಟ್ಟೆಗೆ ಒಮ್ಮೆಲೆ ಶಾಕ್ ನೀಡಿದೆ.! ಹೊಸ ವಿಷಯ ಏನೆಂದರೆ ಶಿಯೋಮಿ ಕಂಪೆನಿ "ರೆಡ್‌ಮಿ ವೈ1" ಮಾರಾಟದ ದಿನಾಂಕವನ್ನು ಪ್ರಕಟಿಸಿದೆ.!!
ಹೌದು, ಒಪ್ಪೊ ಮತ್ತು ವಿವೊ ಸ್ಮಾರ್ಟ್‌ಫೋನ್‌ಗಳಿಗಿಂತ ಅರ್ಧ ಬೆಲೆಗೆ 16MP ಸೆಲ್ಫಿ ಕ್ಯಾಮೆರಾ ಫೋನ್ ಬಿಡುಗಡೆ ಮಾಡಿರುವ ಶಿಯೋಮಿ 'ಶಿಯೋಮಿ ರೆಡ್‌ಮಿ ವೈ1' ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ನವೆಂಬರ್ ಎಂಟನೇ ತಾರೀಖಿನಿಂದ ಮಾರಾಟಕ್ಕಿಟ್ಟಿದೆ.! ಹಾಗಾದರೆ, ರೆಡ್‌ಮಿ ವೈ1 ಫೋನ್ ಮಾರಾಟ ಎಲ್ಲೆಲ್ಲಿ? ಆಫರ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!