Surprise Me!

Kannada Tech News (15-11-2017) : Vodafone, Oppo, Nokia, Jio, iPhone x, Xiaomi

2017-11-15 105 Dailymotion

ವೊಡಾಫೋನ್ ಚೋಟಾ ಚಾಂಪಿಯನ್ ಆಫರ್
ಒಪ್ಪೋ ಜಿಯೋ ಆಫರ್
ನೋಕಿಯಾ ವೀಕ್ ಆಫರ್
ಶಿಯೋಮಿ ಫೋಟೋ ಚಾಲೆಂಜ್
ಮುಂದಿನ ವರ್ಷ ಮೂರು ಹೊಸ ಐಫೋನ್ ಲಾಂಚ್:

ಅಮೆಜಾನ್ ಪ್ರೈಮ್ ಸದಸ್ಯರು ನೋಕಿಯಾ 6 ರೂ. 2500ರ ವರೆಗೆ ಕ್ಯಾಷ್ ಬ್ಯಾಕ್ ಆಫರ್ ದೊರೆಯುತ್ತಿದೆ. ಇದಲ್ಲದೇ ಅಮೇಜಾನ್ ಪೇ ಮೂಲಕ ಖರೀದಿಸಿದವರಿಗೆ ನೋಕಿಯಾ 8 ರೂ. 1,500ರ ವರೆಗೆ ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ. ಅಲ್ಲದೇ ನೋಕಿಯಾ 6 ಮೇಲೆ ರೂ. 500 ವರೆಗೂ ಕ್ಯಾಷ್ ಬ್ಯಾಕ್ ದೊರೆಯಲಿದೆ.
ಜಿಯೋ-ಒಪ್ಪೋ ಹೆಚ್ಚುವರಿ ಡೇಟಾ ಆಫರ್ ಈಗಾಗಲೇ ಜಾರಿಯಲ್ಲಿದ್ದೂ ಒಪ್ಪೋ ನೂತನ ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋದಿಂದ ಹೆಚ್ಚುವರಿ ಡೇಟಾ ಆಯ್ಕೆಯು ದೊರೆಯಲಿದೆ ಎನ್ನಲಾಗಿದೆ. ಈ ಆಫರ್ ಒಪ್ಪೋ ಬಿಡುಗಡೆ ಮಾಡಿರುವ ಎಲ್ಲಾ 4G ಗಳಲ್ಲೂ ಲಭ್ಯವಿರಲಿದೆ. ಒಟ್ಟು 100GB ಡೇಟಾ ಬಳಕೆಗೆ ದೊರೆಯಲಿದೆ.
ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಇದೇ ಮಾದರಿಯಲ್ಲಿ ಡ್ಯುಯಲ್ ಕ್ಯಾಮೆರಾ ಫೋನ್ ಆಗಿರುವ Mi A1 ಸ್ಮಾರ್ಟ್‌ಫೋನ್ ನಲ್ಲಿ ಫೋಟೋ ತೆಗೆದವರಿಗೆ ಹತ್ತಿರ ಹತ್ತಿರ 20 ಲಕ್ಷ ಬಹುಮಾನವನ್ನು ಘೋಷಣೆ ಮಾಡಿದೆ. ಈ ಮೂಲಕ ತನ್ನ ಸ್ಮಾರ್ಟ್‌ಫೋನ್ ಮಾರಾಟವನ್ನು ಹೆಚ್ಚಿಸಲು ಮುಂದಾಗಿದೆ ಎನ್ನಲಾಗಿದೆ.