ಸ್ಯಾಂಡಲ್ ವುಡ್ ನಲ್ಲಿ Metoo ಬಿಸಿ ಹೆಚ್ಚಾಗಿದೆ. 'ನಟ ಅರ್ಜುನ್ ಸರ್ಜಾ ಅವರಿಂದ ನನ್ನ ಮೇಲೆ ಕೆಟ್ಟ ಅನುಭವ ಆಗಿದೆ' ಎಂದು ನಟಿ ಶೃತಿ ಹರಿಹರನ್ ಹೇಳಿಕೊಂಡಿದ್ದಾರೆ. 'ವಿಸ್ಮಯ' ಸಿನಿಮಾದಲ್ಲಿ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಒಟ್ಟಿಗೆ ನಟಿಸಿದ್ದು, ಚಿತ್ರದ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಶ್ರುತಿ ಹರಿಹರನ್ ಆರೋಪ ಮಾಡಿದ್ದಾರೆ.