ಹೈದರಾಬಾದ್: ವಿಶ್ವಪ್ರಸಿದ್ಧ ರಾಮೋಜಿ ಫಿಲ್ಮ್ ಸಿಟಿಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಮೋಜಿ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕಿ ವಿಜಯೇಶ್ವರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ನಂತರ, ವಿಜಯೇಶ್ವರಿ ಅವರು ರಾಮೋಜಿ ಫಿಲ್ಮ್ ಸಿಟಿ ಭದ್ರತಾ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದರು. ಇದೇ ವೇಳೆ ಸಂಸ್ಥೆಯ ಉದ್ಯೋಗಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ರಾಮೋಜಿ ರಾವ್ ಅವರ ಮೊಮ್ಮಗ ಸಿ.ಎಚ್. ಪೂರ್ಣ ಸುಜಯ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರ್‌ಎಫ್‌ಸಿ, ಈನಾಡು, ಈಟಿವಿ, ಈಟಿವಿ ಭಾರತ್ ಮತ್ತು ಡಾಲ್ಫಿನ್ ಹೋಟೆಲ್‌ಗಳ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಉದ್ಯೋಗಿಗಳು ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.
ರಾಜಧಾನಿಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ: ರಾಜಧಾನಿ ನವದೆಹಲಿಯಲ್ಲೂ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಿಸಲಾಗಿದ್ದು, ಕರ್ತವ್ಯಪಥದಲ್ಲಿ ಸಶಸ್ತ್ರ ಪಡೆಗಳ ತಮ್ಮ ಶಕ್ತಿ ಪ್ರದರ್ಶಿಸಿದವು. 'ಆಪರೇಷನ್ ಸಿಂಧೂರ್' ನಲ್ಲಿ ಬಳಸಲಾದ ಕ್ಷಿಪಣಿಗಳು, ಯುದ್ಧ ವಿಮಾನಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಒಳಗೊಂಡ ಮಿಲಿಟರಿ ಪರಾಕ್ರಮದ ಪ್ರದರ್ಶನ ಪರೇಡ್ನಲ್ಲಿ ನೆರೆದಿದ್ದವರನ್ನು ರೋಮಾಂಚನ ಗೊಳಿಸಿತು.
ಇದನ್ನೂ ನೋಡಿ: ರಾಜ್ಯಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ: ಹುಬ್ಬಳ್ಳಿಯಲ್ಲಿ ಸ್ವಚ್ಛ ವಾಹಿನಿ ಚಾಲಕಿಯಿಂದ ಧ್ವಜಾರೋಹಣ