Surprise Me!

ವಿಜಯಪುರ: ಶಿವಗಿರಿಯಲ್ಲಿ ಶಿವ ಭಕ್ತರ ದಂಡು..Watch in video

2026-02-16 3 Dailymotion

ವಿಜಯಪುರ: ರಾಜ್ಯದಲ್ಲೇ ಎರಡನೇ ಅತೀ ಎತ್ತರದ ಶಿವನ ವಿಗ್ರಹ ಶಿವಗಿರಿಯಲ್ಲಿದ್ದು, ಮಹಾಶಿವರಾತ್ರಿ ಹಿನ್ನೆಲೆ ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶಿವನ ದರ್ಶನ ಪಡೆದರು. ವಿಜಯಪುರ ನಗರದ ವಿವಿಧೆಡೆ ಇರುವ ಶಿವನ ದೇಗುಲಗಳು ಭಕ್ತರಿಂದ ತುಂಬಿ ತುಳುಕಿದವು. ವಿಜಯಪುರ ನಗರದ ಉಕ್ಕಲಿ ರಸ್ತೆಯ ಶಿವಗಿರಿಯಲ್ಲಿರುವ ಶಿವನ ಮೂರ್ತಿ ಬರೋಬ್ಬರಿ 85 ಅಡಿ ಎತ್ತರವಿದೆ. 1,500 ಟನ್ ತೂಕ, 150 ಅಡಿ ಅಗಲ ಹೊಂದಿರುವ ಶಿವಮೂರ್ತಿ ಇರುವ ಈ ಸ್ಥಳವನ್ನು ವಿಜಯಪುರದಲ್ಲಿ ಪ್ರೇಕ್ಷಣೀಯ ಸ್ಥಳವಾಗಿ ಹಾಗೂ ಧಾರ್ಮಿಕ ಸ್ಥಳ ಎಂದು ಗುರುತಿಸಲಾಗುತ್ತದೆ. 

ವಿಜಯಪುರ ನಗರ ಹೊರ ಭಾಗದಲ್ಲಿ ಶಿವನ ಮೂರ್ತಿ ಸ್ಥಾಪನೆ ಮಾಡಿ 20 ವರ್ಷವಾಗಿದೆ. ದಿನದಿಂದ ದಿನಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ. ಇಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. 85 ಅಡಿ ಎತ್ತರದ ಶಿವನ ಮೂರ್ತಿ ಇದಾಗಿದೆ. ಸುಂದರವಾದ ಮೂರ್ತಿಯನ್ನು ಇಲ್ಲಿ‌ ನಿರ್ಮಾಣ ಮಾಡಲಾಗಿದೆ. ವಿಜಯಪುರ ನಗರದ ಮನಗೂಳಿ ಅಗಸಿ ಬಳಿಯ ಗವಿ ಶಿವಲಿಂಗ, ಸುಂದರೇಶ್ವರ ದೇಗುಲ, ಲಿಂಗದ ಗುಡಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಶಿವ ದೇವಾಲಯಗಳಲ್ಲಿ ನಿನ್ನೆ ಶಿವನಾಮಸ್ಮರಣೆ ಜತೆ ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮ; ಮಾದಪ್ಪನ ದರ್ಶನ ಪಡೆದ ಡಿಕೆಶಿ ಪತ್ನಿ